The Quran in Kannada - Surah Adiyat translated into Kannada, Surah Al-Adiyat in Kannada. We provide accurate translation of Surah Adiyat in Kannada - الكانادا, Verses 11 - Surah Number 100 - Page 599.

| وَالْعَادِيَاتِ ضَبْحًا (1) ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ |
| فَالْمُورِيَاتِ قَدْحًا (2) ಅವು ಕಿಡಿ ಹಾರಿಸುತ್ತವೆ |
| فَالْمُغِيرَاتِ صُبْحًا (3) ಮುಂಜಾವಿನ ಹೊತ್ತು ಅವು ಧಾಳಿ ಮಾಡಿ ಬಿಡುತ್ತವೆ |
| فَأَثَرْنَ بِهِ نَقْعًا (4) ಅವು ಧೂಳೆಬ್ಬಿಸಿ ಬಿಡುತ್ತವೆ |
| فَوَسَطْنَ بِهِ جَمْعًا (5) ಮತ್ತು ಶತ್ರುಗಳ ಪಡೆಗಳೊಳಗೆ ನುಗ್ಗಿ ಬಿಡುತ್ತವೆ |
| إِنَّ الْإِنسَانَ لِرَبِّهِ لَكَنُودٌ (6) ಮನುಷ್ಯನು ಖಂಡಿತ ತನ್ನ ಒಡೆಯನಿಗೆ ಕೃತಘ್ನನಾಗಿದ್ದಾನೆ |
| وَإِنَّهُ عَلَىٰ ذَٰلِكَ لَشَهِيدٌ (7) ಇದಕ್ಕೆ ಖಂಡಿತ ಅವನೇ ಸಾಕ್ಷಿಯಾಗಿದ್ದಾನೆ |
| وَإِنَّهُ لِحُبِّ الْخَيْرِ لَشَدِيدٌ (8) ಅವನು ಸಂಪತ್ತನ್ನು ತುಂಬಾ ಪ್ರೀತಿಸುತ್ತಾನೆ |
| ۞ أَفَلَا يَعْلَمُ إِذَا بُعْثِرَ مَا فِي الْقُبُورِ (9) ಅವನಿಗೆ ತಿಳಿದಿಲ್ಲವೇ, ಗೋರಿಗಳೊಳಗೆ ಇರುವವರನ್ನೆಲ್ಲಾ ಹೊರ ತೆಗೆಯಲಾಗುವ ದಿನದ ಕುರಿತು |
| وَحُصِّلَ مَا فِي الصُّدُورِ (10) ಮತ್ತು ಮನಸ್ಸುಗಳೊಳಗೆ ಇರುವ ಎಲ್ಲವನ್ನೂ ಪ್ರಕಟ ಪಡಿಸಲಾಗುವ ದಿನದ ಕುರಿತು |
| إِنَّ رَبَّهُم بِهِمْ يَوْمَئِذٍ لَّخَبِيرٌ (11) ಅಂದು ಅವರ ಒಡೆಯನು ಖಂಡಿತ ಅವರ ಕುರಿತು ಎಲ್ಲವನ್ನೂ ಬಲ್ಲವನಾಗಿರುವನು |