القرآن باللغة الكانادا - سورة العاديات مترجمة إلى اللغة الكانادا، Surah Adiyat in Kannada. نوفر ترجمة دقيقة سورة العاديات باللغة الكانادا - Kannada, الآيات 11 - رقم السورة 100 - الصفحة 599.
وَالْعَادِيَاتِ ضَبْحًا (1) ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ |
فَالْمُورِيَاتِ قَدْحًا (2) ಅವು ಕಿಡಿ ಹಾರಿಸುತ್ತವೆ |
فَالْمُغِيرَاتِ صُبْحًا (3) ಮುಂಜಾವಿನ ಹೊತ್ತು ಅವು ಧಾಳಿ ಮಾಡಿ ಬಿಡುತ್ತವೆ |
فَأَثَرْنَ بِهِ نَقْعًا (4) ಅವು ಧೂಳೆಬ್ಬಿಸಿ ಬಿಡುತ್ತವೆ |
فَوَسَطْنَ بِهِ جَمْعًا (5) ಮತ್ತು ಶತ್ರುಗಳ ಪಡೆಗಳೊಳಗೆ ನುಗ್ಗಿ ಬಿಡುತ್ತವೆ |
إِنَّ الْإِنسَانَ لِرَبِّهِ لَكَنُودٌ (6) ಮನುಷ್ಯನು ಖಂಡಿತ ತನ್ನ ಒಡೆಯನಿಗೆ ಕೃತಘ್ನನಾಗಿದ್ದಾನೆ |
وَإِنَّهُ عَلَىٰ ذَٰلِكَ لَشَهِيدٌ (7) ಇದಕ್ಕೆ ಖಂಡಿತ ಅವನೇ ಸಾಕ್ಷಿಯಾಗಿದ್ದಾನೆ |
وَإِنَّهُ لِحُبِّ الْخَيْرِ لَشَدِيدٌ (8) ಅವನು ಸಂಪತ್ತನ್ನು ತುಂಬಾ ಪ್ರೀತಿಸುತ್ತಾನೆ |
۞ أَفَلَا يَعْلَمُ إِذَا بُعْثِرَ مَا فِي الْقُبُورِ (9) ಅವನಿಗೆ ತಿಳಿದಿಲ್ಲವೇ, ಗೋರಿಗಳೊಳಗೆ ಇರುವವರನ್ನೆಲ್ಲಾ ಹೊರ ತೆಗೆಯಲಾಗುವ ದಿನದ ಕುರಿತು |
وَحُصِّلَ مَا فِي الصُّدُورِ (10) ಮತ್ತು ಮನಸ್ಸುಗಳೊಳಗೆ ಇರುವ ಎಲ್ಲವನ್ನೂ ಪ್ರಕಟ ಪಡಿಸಲಾಗುವ ದಿನದ ಕುರಿತು |
إِنَّ رَبَّهُم بِهِمْ يَوْمَئِذٍ لَّخَبِيرٌ (11) ಅಂದು ಅವರ ಒಡೆಯನು ಖಂಡಿತ ಅವರ ಕುರಿತು ಎಲ್ಲವನ್ನೂ ಬಲ್ಲವನಾಗಿರುವನು |