عَبَسَ وَتَوَلَّىٰ (1) – ತಮ್ಮ ಬಳಿಗೆ ಕುರುಡನೊಬ್ಬನು ಬಂದನೆಂದು |
أَن جَاءَهُ الْأَعْمَىٰ (2) (ದೂತರೇ,) ನಿಮಗೇನು ಗೊತ್ತು – ಅವನು ಸಂಸ್ಕಾರವಂತನಾಗಲೂ ಬಹುದು |
وَمَا يُدْرِيكَ لَعَلَّهُ يَزَّكَّىٰ (3) ಅಥವಾ ಉಪದೇಶದ ಕುರಿತು ಅವನು ಚಿಂತಿಸ ಬಹುದು ಮತ್ತು ಅವನಿಗೆ |
أَوْ يَذَّكَّرُ فَتَنفَعَهُ الذِّكْرَىٰ (4) ಉಪದೇಶದಿಂದ ಲಾಭವಾಗ ಬಹುದು |
أَمَّا مَنِ اسْتَغْنَىٰ (5) (ನಿಮ್ಮನ್ನು) ಕಡೆಗಣಿಸುವವನು |
فَأَنتَ لَهُ تَصَدَّىٰ (6) ಅವನೆಡೆಗೆ ನೀವು ಗಮನ ಹರಿಸುತ್ತೀರಿ |
وَمَا عَلَيْكَ أَلَّا يَزَّكَّىٰ (7) ಅವನು ಸುಧಾರಿಸದಿದ್ದರೆ ನಿಮ್ಮ ಮೇಲೆ ದೋಷವೇನಿಲ್ಲ |
وَأَمَّا مَن جَاءَكَ يَسْعَىٰ (8) ಆದರೆ ನಿಮ್ಮೆಡೆಗೆ ಧಾವಿಸಿ ಬಂದ ವ್ಯಕ್ತಿ |
وَهُوَ يَخْشَىٰ (9) ಅವನು ಭಯಭಕ್ತಿ ಉಳ್ಳವನು |
فَأَنتَ عَنْهُ تَلَهَّىٰ (10) ನೀವು ಅವನನ್ನು ನಿರ್ಲಕ್ಷಿಸುತ್ತೀರಿ |
كَلَّا إِنَّهَا تَذْكِرَةٌ (11) ಹಾಗಲ್ಲ, ಇದು (ಕುರ್ಆನ್) ಒಂದು ಉಪದೇಶವಾಗಿದೆ |
فَمَن شَاءَ ذَكَرَهُ (12) ಇಷ್ಟ ಉಳ್ಳವನು ಇದರಿಂದ ಉಪದೇಶ ಪಡೆಯಲಿ |
فِي صُحُفٍ مُّكَرَّمَةٍ (13) ಇದು ಗೌರವಾರ್ಹ ಹಾಳೆಗಳಲ್ಲಿ ಲಿಖಿತವಾಗಿದೆ |
مَّرْفُوعَةٍ مُّطَهَّرَةٍ (14) ಉನ್ನತ ಸ್ಥಾನದಲ್ಲಿದ್ದು, ಪಾವನವಾಗಿದೆ |
بِأَيْدِي سَفَرَةٍ (15) ಅದು ಬರೆಯುವವರ ಕೈಯಲ್ಲಿದೆ |
كِرَامٍ بَرَرَةٍ (16) ಅವರು ಗೌರವಾನ್ವಿತರು ಮತ್ತು ಶ್ರೇಷ್ಠರು |
قُتِلَ الْإِنسَانُ مَا أَكْفَرَهُ (17) ಮಾನವನಿಗೆ ಛೀಮಾರಿ. ಅವನು ಅದೆಷ್ಟು ಕೃತಘ್ನನು |
مِنْ أَيِّ شَيْءٍ خَلَقَهُ (18) ಅವನನ್ನು ಸೃಷ್ಟಿಸಲಾಗಿರುವುದು ಯಾವುದರಿಂದ |
مِن نُّطْفَةٍ خَلَقَهُ فَقَدَّرَهُ (19) ವೀರ್ಯದಿಂದ. ಅವನು (ಅಲ್ಲಾಹನು) ಆತನನ್ನು ಸೃಷ್ಟಿಸಿದನು ಹಾಗೂ ಆತನ ವಿಧಿಯನ್ನು ನಿಶ್ಚಯಿಸಿದನು |
ثُمَّ السَّبِيلَ يَسَّرَهُ (20) ಆ ಬಳಿಕ ಅವನಿಗೆ ಬದುಕಿನ ದಾರಿಯನ್ನು ಸುಗಮಗೊಳಿಸಿದನು |
ثُمَّ أَمَاتَهُ فَأَقْبَرَهُ (21) ಆ ಬಳಿಕ ಅವನನ್ನು ಸಾಯಿಸಿ ಅವನನ್ನು ಗೋರಿಗೆ ತಲುಪಿಸಿದನು |
ثُمَّ إِذَا شَاءَ أَنشَرَهُ (22) ಆ ಬಳಿಕ ಅವನು, ತಾನಿಚ್ಛಿಸಿದಾಗ ಅವನನ್ನು ಪುನಃ ಜೀವಂತಗೊಳಿಸುವನು |
كَلَّا لَمَّا يَقْضِ مَا أَمَرَهُ (23) ಹಾಗಲ್ಲ, ಅವನು (ಮಾನವನು) ತನಗೆ ನೀಡಲಾದ ಆದೇಶವನ್ನು ಪಾಲಿಸಲಿಲ್ಲ |
فَلْيَنظُرِ الْإِنسَانُ إِلَىٰ طَعَامِهِ (24) ಮನುಷ್ಯನು ತನ್ನ ಆಹಾರದ ಕಡೆಗೊಮ್ಮೆ ನೋಡಲಿ |
أَنَّا صَبَبْنَا الْمَاءَ صَبًّا (25) ನೀರು ಸುರಿಸಿದವರು ನಾವು |
ثُمَّ شَقَقْنَا الْأَرْضَ شَقًّا (26) ಭೂಮಿಯನ್ನು ಸೀಳಿದವರು ನಾವು |
فَأَنبَتْنَا فِيهَا حَبًّا (27) ಅದರಲ್ಲಿ ಬೆಳೆಗಳನ್ನು ಬೆಳೆದವರು ನಾವು |
وَعِنَبًا وَقَضْبًا (28) ದ್ರಾಕ್ಷಿಗಳು ಹಾಗೂ ತರಕಾರಿಗಳು |
وَزَيْتُونًا وَنَخْلًا (29) ಝೈತೂನ್ ಹಾಗೂ ಖರ್ಜೂರಗಳು |
وَحَدَائِقَ غُلْبًا (30) ದಟ್ಟವಾದ ತೋಟಗಳು |
وَفَاكِهَةً وَأَبًّا (31) ಹಣ್ಣುಗಳು ಹಾಗೂ ಮೇವು |
مَّتَاعًا لَّكُمْ وَلِأَنْعَامِكُمْ (32) ನಿಮಗಾಗಿ ಹಾಗೂ ನಿಮ್ಮ ಜಾನುವಾರುಗಳಿಗಾಗಿ ಇದನ್ನೆಲ್ಲಾ ಮಾಡಲಾಯಿತು |
فَإِذَا جَاءَتِ الصَّاخَّةُ (33) ಕೊನೆಗೆ ಪುನರುತ್ಥಾನದ ಕೋಲಾಹಲವು ಮೊಳಗಿದಾಗ |
يَوْمَ يَفِرُّ الْمَرْءُ مِنْ أَخِيهِ (34) ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು |
وَأُمِّهِ وَأَبِيهِ (35) ತನ್ನ ತಂದೆಯಿಂದಲೂ ತಾಯಿಯಿಂದಲೂ |
وَصَاحِبَتِهِ وَبَنِيهِ (36) ಪತ್ನಿಯಿಂದಲೂ ಪುತ್ರರಿಂದಲೂ (ದೂರ ಓಡುವನು) |
لِكُلِّ امْرِئٍ مِّنْهُمْ يَوْمَئِذٍ شَأْنٌ يُغْنِيهِ (37) ಅಂದು ಪ್ರತಿಯೊಬ್ಬನೂ ತನಗೊದಗಿರುವ ಚಿಂತೆಯಲ್ಲೇ ಮಗ್ನನಾಗಿರುವನು |
وُجُوهٌ يَوْمَئِذٍ مُّسْفِرَةٌ (38) ಅಂದು ಕೆಲವು ಮುಖಗಳು ಉಜ್ವಲವಾಗಿರುವವು |
ضَاحِكَةٌ مُّسْتَبْشِرَةٌ (39) ನಗುತ್ತಾ ಸಂಭ್ರಮಿಸುತ್ತಿರುವವು |
وَوُجُوهٌ يَوْمَئِذٍ عَلَيْهَا غَبَرَةٌ (40) ಮತ್ತೆ ಕೆಲವು ಮುಖಗಳ ಮೇಲೆ ಅಂದು ಧೂಳು ತುಂಬಿರುವುದು |
تَرْهَقُهَا قَتَرَةٌ (41) (ಮತ್ತು ) ಕರಾಳತೆ ಕವಿದಿರುವುದು |
أُولَٰئِكَ هُمُ الْكَفَرَةُ الْفَجَرَةُ (42) ಅವರು ಧಿಕ್ಕಾರಿ ದುಷ್ಕರ್ಮಿಗಳಾಗಿರುವರು |