| إِذَا الشَّمْسُ كُوِّرَتْ (1) ಸೂರ್ಯನನ್ನು ಮಡಚಿ ಬಿಡಲಾದಾಗ
 | 
| وَإِذَا النُّجُومُ انكَدَرَتْ (2) ನಕ್ಷತ್ರಗಳು ನಿಸ್ತೇಜವಾದಾಗ
 | 
| وَإِذَا الْجِبَالُ سُيِّرَتْ (3) ಪರ್ವತಗಳನ್ನು ಚಲಾಯಿಸಲಾದಾಗ
 | 
| وَإِذَا الْعِشَارُ عُطِّلَتْ (4) ತುಂಬು ಗರ್ಭಿಣಿಯಾಗಿರುವ ಒಂಟೆಗಳನ್ನು ಬಿಟ್ಟು ಬಿಡಲಾದಾಗ
 | 
| وَإِذَا الْوُحُوشُ حُشِرَتْ (5) ಕಾಡು ಪ್ರಾಣಿಗಳನ್ನೆಲ್ಲಾ ಒಟ್ಟು ಸೇರಿಸಲಾದಾಗ
 | 
| وَإِذَا الْبِحَارُ سُجِّرَتْ (6) ಸಮುದ್ರಗಳನ್ನು ಉಕ್ಕೇರಿಸಲಾದಾಗ
 | 
| وَإِذَا النُّفُوسُ زُوِّجَتْ (7) ಜೀವಗಳನ್ನು (ಶರೀರಗಳೊಂದಿಗೆ) ಜೋಡಿಸಲಾದಾಗ
 | 
| وَإِذَا الْمَوْءُودَةُ سُئِلَتْ (8) ಜೀವಂತ ಹೂಳಲ್ಪಟ್ಟವಳೊಡನೆ ಪ್ರಶ್ನಿಸಲಾದಾಗ –
 | 
| بِأَيِّ ذَنبٍ قُتِلَتْ (9) ಯಾವ ಪಾಪಕ್ಕಾಗಿ ಆಕೆಯನ್ನು ಕೊಲ್ಲಲಾಯಿತೆಂದು
 | 
| وَإِذَا الصُّحُفُ نُشِرَتْ (10) ಕರ್ಮ ಪತ್ರಗಳನ್ನು ತೆರೆಯಲಾದಾಗ
 | 
| وَإِذَا السَّمَاءُ كُشِطَتْ (11) ಮತ್ತು ಆಕಾಶದ ಕವಚವನ್ನು ಸರಿಸಲಾದಾಗ
 | 
| وَإِذَا الْجَحِيمُ سُعِّرَتْ (12) ನರಕದ ಅಗ್ನಿಯನ್ನು ಭುಗಿಲೆಬ್ಬಿಸಲಾದಾಗ
 | 
| وَإِذَا الْجَنَّةُ أُزْلِفَتْ (13) ಸ್ವರ್ಗವನ್ನು ಹತ್ತಿರ ತರಲಾದಾಗ
 | 
| عَلِمَتْ نَفْسٌ مَّا أَحْضَرَتْ (14) ಪ್ರತಿಯೊಬ್ಬನಿಗೂ ತಿಳಿದು ಬಿಡುವುದು ತಾನೇನು ತಂದಿರುವೆನೆಂದು
 | 
| فَلَا أُقْسِمُ بِالْخُنَّسِ (15) ಹಾಗಲ್ಲ – ನಾನು, ಹಿನ್ನಡೆಯುವ ನಕ್ಷತ್ರಗಳ ಆಣೆ ಹಾಕುತ್ತೇನೆ
 | 
| الْجَوَارِ الْكُنَّسِ (16) ಅವು ಸಂಚರಿಸುತ್ತವೆ ಮತ್ತು ಕಣ್ಮರೆಯಾಗುತ್ತವೆ
 | 
| وَاللَّيْلِ إِذَا عَسْعَسَ (17) ಮತ್ತು ಇರುಳು ಕಣ್ಮರೆಯಾಗುವ ಹೊತ್ತಿನ ಆಣೆ
 | 
| وَالصُّبْحِ إِذَا تَنَفَّسَ (18) ಮತ್ತು ಮುಂಜಾವು ಉಸಿರಾಡ ತೊಡಗುವಾಗಿನಾಣೆ
 | 
| إِنَّهُ لَقَوْلُ رَسُولٍ كَرِيمٍ (19) ಇದು (ಕುರ್‌ಆನ್) ಗೌರವಾನ್ವಿತ ದೂತನೊಬ್ಬನು ತಲುಪಿಸಿರುವ ಸಂದೇಶವಾಗಿದೆ
 | 
| ذِي قُوَّةٍ عِندَ ذِي الْعَرْشِ مَكِينٍ (20) ಅವನು ತುಂಬಾ ಬಲಿಷ್ಠನೂ ವಿಶ್ವ ಸಿಂಹಾಸನದ ಒಡೆಯನ ಬಳಿ ಉನ್ನತ ಸ್ಥಾನ ಉಳ್ಳವನೂ ಆಗಿದ್ದಾನೆ
 | 
| مُّطَاعٍ ثَمَّ أَمِينٍ (21) ಅವನು ಅನುಸರಣೀಯನೂ ವಿಶ್ವಾಸಾರ್ಹನೂ ಆಗಿರುತ್ತಾನೆ
 | 
| وَمَا صَاحِبُكُم بِمَجْنُونٍ (22) ನಿಮ್ಮ ಸಂಗಾತಿ (ದೂತರು) ಹುಚ್ಚರೇನಲ್ಲ
 | 
| وَلَقَدْ رَآهُ بِالْأُفُقِ الْمُبِينِ (23) ಅವರು ತೆರೆದ ಬಾನಿನಂಚಿನಲ್ಲಿ ಆತನನ್ನು (ಜಿಬ್‌ರೀಲ್‌ರನ್ನು) ಕಂಡರು
 | 
| وَمَا هُوَ عَلَى الْغَيْبِ بِضَنِينٍ (24) ಅವರು ಅಜ್ಞಾತ ಲೋಕದ ಮಾಹಿತಿಗಳನ್ನು ತಲುಪಿಸುವುದರಲ್ಲಿ ಜಿಪುಣರಲ್ಲ
 | 
| وَمَا هُوَ بِقَوْلِ شَيْطَانٍ رَّجِيمٍ (25) ಇದು (ಕುರ್‌ಆನ್) ಶಪಿತ ಶೈತಾನನ ವಚನವಲ್ಲ
 | 
| فَأَيْنَ تَذْهَبُونَ (26) ನೀವು ಅದೆಲ್ಲಿ ಅಲೆಯುತ್ತಿರುವಿರಿ
 | 
| إِنْ هُوَ إِلَّا ذِكْرٌ لِّلْعَالَمِينَ (27) ಇದು ಸರ್ವ ಲೋಕಕ್ಕಾಗಿರುವ ಉಪದೇಶವಾಗಿರುತ್ತದೆ
 | 
| لِمَن شَاءَ مِنكُمْ أَن يَسْتَقِيمَ (28) ನಿಮ್ಮ ಪೈಕಿ ಇಷ್ಟ ಉಳ್ಳವನು ನೇರ ಮಾರ್ಗವನ್ನು ಹಿಡಿಯಲಿ
 | 
| وَمَا تَشَاءُونَ إِلَّا أَن يَشَاءَ اللَّهُ رَبُّ الْعَالَمِينَ (29) ನಿಮ್ಮ ಇಚ್ಛೆಯಿಂದ ಏನೂ ಆಗುವುದಿಲ್ಲ – ಸರ್ವಲೋಕಗಳ ಒಡೆಯನಾದ ಅಲ್ಲಾಹನು ಇಚ್ಛಿಸುವ ತನಕ
 |