سَبِّحِ اسْمَ رَبِّكَ الْأَعْلَى (1) (ದೂತರೇ,) ಉನ್ನತನಾಗಿರುವ ನಿಮ್ಮ ಒಡೆಯನ ಪಾವಿತ್ರವನ್ನು ಜಪಿಸಿರಿ |
الَّذِي خَلَقَ فَسَوَّىٰ (2) (ಅವನು) ನಿಮ್ಮನ್ನು ಸೃಷ್ಟಿಸಿದವನು ಮತ್ತು ರೂಪಿಸಿದವನು |
وَالَّذِي قَدَّرَ فَهَدَىٰ (3) ವಿಧಿಯನ್ನು ನಿರ್ಣಯಿಸಿದವನು, ಸರಿದಾರಿಯನ್ನು ತೋರಿದವನು |
وَالَّذِي أَخْرَجَ الْمَرْعَىٰ (4) ಮೇವನ್ನು ಬೆಳೆಸಿದವನು |
فَجَعَلَهُ غُثَاءً أَحْوَىٰ (5) ಕೊನೆಗೆ ಅವನು ಅದನ್ನು ಕಪ್ಪಗಿನ ಕಸವಾಗಿಸಿದನು |
سَنُقْرِئُكَ فَلَا تَنسَىٰ (6) ನಾವು ನಿಮಗೆ ಓದಿಸುವೆವು ಮತ್ತೆ ನೀವು ಮರೆಯಲಾರಿರಿ |
إِلَّا مَا شَاءَ اللَّهُ ۚ إِنَّهُ يَعْلَمُ الْجَهْرَ وَمَا يَخْفَىٰ (7) ಅಲ್ಲಾಹನು ಇಚ್ಛಿಸಿದ್ದರ ಹೊರತು. ಅವನು ಬಹಿರಂಗವಾದುದನ್ನು ಮತ್ತು ಗುಪ್ತವಾದುದನ್ನು ಖಂಡಿತ ಬಲ್ಲನು |
وَنُيَسِّرُكَ لِلْيُسْرَىٰ (8) ನಾವು ನಿಮ್ಮ ಪಾಲಿಗೆ ಸುಲಭದ ಹಾದಿಯನ್ನು ಸುಗಮ ಗೊಳಿಸುವೆವು |
فَذَكِّرْ إِن نَّفَعَتِ الذِّكْرَىٰ (9) ಉಪದೇಶದಿಂದ ಲಾಭವಿದ್ದಲ್ಲಿ ನೀವು ಉಪದೇಶಿಸಿ |
سَيَذَّكَّرُ مَن يَخْشَىٰ (10) (ದೇವರ) ಭಯ ಉಳ್ಳವನು ಉಪದೇಶ ಸ್ವೀಕರಿಸುವನು |
وَيَتَجَنَّبُهَا الْأَشْقَى (11) ದುಷ್ಟನು ಅದರಿಂದ ದೂರ ಉಳಿಯುವನು |
الَّذِي يَصْلَى النَّارَ الْكُبْرَىٰ (12) ಅವನು (ಪರಲೋಕದಲ್ಲಿ) ಮಹಾ ಅಗ್ನಿ ಕುಂಡವನ್ನು ಸೇರುವನು |
ثُمَّ لَا يَمُوتُ فِيهَا وَلَا يَحْيَىٰ (13) ಅದರಲ್ಲಿ ಅವನಿಗೆ ಸಾಯಲಿಕ್ಕೂ ಆಗದು ಬದುಕಲಿಕ್ಕೂ ಆಗದು |
قَدْ أَفْلَحَ مَن تَزَكَّىٰ (14) ಖಂಡಿತ ವಿಜಯಿಯಾದನು – ಶುದ್ಧನಾದವನು |
وَذَكَرَ اسْمَ رَبِّهِ فَصَلَّىٰ (15) ಮತ್ತು ತನ್ನೊಡೆಯನ ಹೆಸರನ್ನು ಸ್ಮರಿಸಿದವನು ಮತ್ತು ನಮಾಝನ್ನು ಸಲ್ಲಿಸಿದವನು |
بَلْ تُؤْثِرُونَ الْحَيَاةَ الدُّنْيَا (16) ಆದರೆ ನೀವು ಇಹಲೋಕದ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ |
وَالْآخِرَةُ خَيْرٌ وَأَبْقَىٰ (17) ನಿಜವಾಗಿ ಪರಲೋಕವು ಉತ್ತಮವಾಗಿದೆ – ಮತ್ತು ಅದು ಸದಾ ಉಳಿದಿರುತ್ತದೆ |
إِنَّ هَٰذَا لَفِي الصُّحُفِ الْأُولَىٰ (18) ಗತಕಾಲದ ಗ್ರಂಥಗಳಲ್ಲಿ ಇದನ್ನೇ ಹೇಳಲಾಗಿದೆ – |
صُحُفِ إِبْرَاهِيمَ وَمُوسَىٰ (19) – ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ |