| سَبِّحِ اسْمَ رَبِّكَ الْأَعْلَى (1) (ದೂತರೇ,) ಉನ್ನತನಾಗಿರುವ ನಿಮ್ಮ ಒಡೆಯನ ಪಾವಿತ್ರವನ್ನು ಜಪಿಸಿರಿ
 | 
| الَّذِي خَلَقَ فَسَوَّىٰ (2) (ಅವನು) ನಿಮ್ಮನ್ನು ಸೃಷ್ಟಿಸಿದವನು ಮತ್ತು ರೂಪಿಸಿದವನು
 | 
| وَالَّذِي قَدَّرَ فَهَدَىٰ (3) ವಿಧಿಯನ್ನು ನಿರ್ಣಯಿಸಿದವನು, ಸರಿದಾರಿಯನ್ನು ತೋರಿದವನು
 | 
| وَالَّذِي أَخْرَجَ الْمَرْعَىٰ (4) ಮೇವನ್ನು ಬೆಳೆಸಿದವನು
 | 
| فَجَعَلَهُ غُثَاءً أَحْوَىٰ (5) ಕೊನೆಗೆ ಅವನು ಅದನ್ನು ಕಪ್ಪಗಿನ ಕಸವಾಗಿಸಿದನು
 | 
| سَنُقْرِئُكَ فَلَا تَنسَىٰ (6) ನಾವು ನಿಮಗೆ ಓದಿಸುವೆವು ಮತ್ತೆ ನೀವು ಮರೆಯಲಾರಿರಿ
 | 
| إِلَّا مَا شَاءَ اللَّهُ ۚ إِنَّهُ يَعْلَمُ الْجَهْرَ وَمَا يَخْفَىٰ (7) ಅಲ್ಲಾಹನು ಇಚ್ಛಿಸಿದ್ದರ ಹೊರತು. ಅವನು ಬಹಿರಂಗವಾದುದನ್ನು ಮತ್ತು ಗುಪ್ತವಾದುದನ್ನು ಖಂಡಿತ ಬಲ್ಲನು
 | 
| وَنُيَسِّرُكَ لِلْيُسْرَىٰ (8) ನಾವು ನಿಮ್ಮ ಪಾಲಿಗೆ ಸುಲಭದ ಹಾದಿಯನ್ನು ಸುಗಮ ಗೊಳಿಸುವೆವು
 | 
| فَذَكِّرْ إِن نَّفَعَتِ الذِّكْرَىٰ (9) ಉಪದೇಶದಿಂದ ಲಾಭವಿದ್ದಲ್ಲಿ ನೀವು ಉಪದೇಶಿಸಿ
 | 
| سَيَذَّكَّرُ مَن يَخْشَىٰ (10) (ದೇವರ) ಭಯ ಉಳ್ಳವನು ಉಪದೇಶ ಸ್ವೀಕರಿಸುವನು
 | 
| وَيَتَجَنَّبُهَا الْأَشْقَى (11) ದುಷ್ಟನು ಅದರಿಂದ ದೂರ ಉಳಿಯುವನು
 | 
| الَّذِي يَصْلَى النَّارَ الْكُبْرَىٰ (12) ಅವನು (ಪರಲೋಕದಲ್ಲಿ) ಮಹಾ ಅಗ್ನಿ ಕುಂಡವನ್ನು ಸೇರುವನು
 | 
| ثُمَّ لَا يَمُوتُ فِيهَا وَلَا يَحْيَىٰ (13) ಅದರಲ್ಲಿ ಅವನಿಗೆ ಸಾಯಲಿಕ್ಕೂ ಆಗದು ಬದುಕಲಿಕ್ಕೂ ಆಗದು
 | 
| قَدْ أَفْلَحَ مَن تَزَكَّىٰ (14) ಖಂಡಿತ ವಿಜಯಿಯಾದನು – ಶುದ್ಧನಾದವನು
 | 
| وَذَكَرَ اسْمَ رَبِّهِ فَصَلَّىٰ (15) ಮತ್ತು ತನ್ನೊಡೆಯನ ಹೆಸರನ್ನು ಸ್ಮರಿಸಿದವನು ಮತ್ತು ನಮಾಝನ್ನು ಸಲ್ಲಿಸಿದವನು
 | 
| بَلْ تُؤْثِرُونَ الْحَيَاةَ الدُّنْيَا (16) ಆದರೆ ನೀವು ಇಹಲೋಕದ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ
 | 
| وَالْآخِرَةُ خَيْرٌ وَأَبْقَىٰ (17) ನಿಜವಾಗಿ ಪರಲೋಕವು ಉತ್ತಮವಾಗಿದೆ – ಮತ್ತು ಅದು ಸದಾ ಉಳಿದಿರುತ್ತದೆ
 | 
| إِنَّ هَٰذَا لَفِي الصُّحُفِ الْأُولَىٰ (18) ಗತಕಾಲದ ಗ್ರಂಥಗಳಲ್ಲಿ ಇದನ್ನೇ ಹೇಳಲಾಗಿದೆ –
 | 
| صُحُفِ إِبْرَاهِيمَ وَمُوسَىٰ (19) – ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ
 |