The Quran in Kannada - Surah Duha translated into Kannada, Surah Ad-Dhuha in Kannada. We provide accurate translation of Surah Duha in Kannada - الكانادا, Verses 11 - Surah Number 93 - Page 596.
وَالضُّحَىٰ (1) ಬಿಸಿಲೇರುವ ಸಮಯದಾಣೆ |
وَاللَّيْلِ إِذَا سَجَىٰ (2) ಇರುಳು ಆವರಿಸುವಾಗಿನಾಣೆ |
مَا وَدَّعَكَ رَبُّكَ وَمَا قَلَىٰ (3) (ದೂತರೇ,) ನಿಮ್ಮ ಒಡೆಯನು ನಿಮ್ಮನ್ನು ತೊರೆದಿಲ್ಲ ಮತ್ತು ಅವನು ನಿಮ್ಮಿಂದ ಮುನಿದು ಕೊಂಡಿಲ್ಲ |
وَلَلْآخِرَةُ خَيْرٌ لَّكَ مِنَ الْأُولَىٰ (4) ನಿಮ್ಮ ಪಾಲಿಗೆ ಅನಂತರದ್ದು ಮೊದಲಿನದಕ್ಕಿಂತ (ಪರಲೋಕವು ಇಹಲೋಕಕ್ಕಿಂತ) ಉತ್ತಮವಾಗಿದೆ |
وَلَسَوْفَ يُعْطِيكَ رَبُّكَ فَتَرْضَىٰ (5) ಶೀಘ್ರವೇ ನಿಮ್ಮೊಡೆಯನು, ನೀವು ಸಂತೃಪ್ತರಾಗುವಷ್ಟನ್ನು ನಿಮಗೆ ನೀಡುವನು |
أَلَمْ يَجِدْكَ يَتِيمًا فَآوَىٰ (6) ನೀವು ಅನಾಥರಾಗಿದ್ದುದನ್ನು ಕಂಡು ಅವನು ನಿಮಗೆ ಆಶ್ರಯ ನೀಡಿರಲಿಲ್ಲವೇ |
وَوَجَدَكَ ضَالًّا فَهَدَىٰ (7) ನೀವು ದಾರಿ ತಿಳಿಯದವರಾಗಿದ್ದುದನ್ನು ಕಂಡು ಅವನು ನಿಮಗೆ ದಾರಿ ತೋರಲಿಲ್ಲವೇ |
وَوَجَدَكَ عَائِلًا فَأَغْنَىٰ (8) ಮತ್ತು ನೀವು ದಾರಿದ್ರದಲ್ಲಿದ್ದುದನ್ನು ಕಂಡು ಅವನು ನಿಮ್ಮನ್ನು ಸಂಪನ್ನ ರಾಗಿಸಲಿಲ್ಲವೇ |
فَأَمَّا الْيَتِيمَ فَلَا تَقْهَرْ (9) ನೀವಿನ್ನು ಅನಾಥರನ್ನು ಗದರಿಸಬೇಡಿ |
وَأَمَّا السَّائِلَ فَلَا تَنْهَرْ (10) ಮತ್ತು ಬೇಡುವವನನ್ನು ಜರೆಯಬೇಡಿ |
وَأَمَّا بِنِعْمَةِ رَبِّكَ فَحَدِّثْ (11) ಮತ್ತು ನಿಮ್ಮ ಒಡೆಯನ ಕೊಡುಗೆಗಳನ್ನು (ಜನರಿಗೆ) ವಿವರವಾಗಿ ತಿಳಿಸಿರಿ |