القرآن باللغة الكانادا - سورة التكاثر مترجمة إلى اللغة الكانادا، Surah Takathur in Kannada. نوفر ترجمة دقيقة سورة التكاثر باللغة الكانادا - Kannada, الآيات 8 - رقم السورة 102 - الصفحة 600.
أَلْهَاكُمُ التَّكَاثُرُ (1) (ಮಾನವರೇ.) ಹೆಚ್ಚೆಚ್ಚು ಗಳಿಸುವ ಚಿಂತೆಯು ನಿಮ್ಮನ್ನು ಮೈಮರೆಸಿದೆ |
حَتَّىٰ زُرْتُمُ الْمَقَابِرَ (2) ನೀವು ನಿಮ್ಮ ಗೋರಿಗಳನ್ನು ಕಾಣುವವರೆಗೂ (ಇದು ಮುಂದುವರಿಯಲಿದೆ) |
كَلَّا سَوْفَ تَعْلَمُونَ (3) ಖಂಡಿತ ಇದು ಸರಿಯಲ್ಲ, ನಿಮಗೆ ಬೇಗನೇ ತಿಳಿಯಲಿದೆ |
ثُمَّ كَلَّا سَوْفَ تَعْلَمُونَ (4) ಮತ್ತೆ , ಖಂಡಿತ ಇದು ಸರಿಯಲ್ಲ. ನಿಮಗೆ ಬೇಗನೇ ತಿಳಿಯಲಿದೆ |
كَلَّا لَوْ تَعْلَمُونَ عِلْمَ الْيَقِينِ (5) ಖಂಡಿತ ಇದು ಸರಿಯಲ್ಲ, ನಿಮಗೆ (ಈ ವಾಸ್ತವವು) ಜ್ಞಾನ ತುಂಬಿದ ನಂಬಿಕೆಯೊಂದಿಗೆ ತಿಳಿದಿದ್ದರೆ ಚೆನ್ನಾಗಿತ್ತು |
لَتَرَوُنَّ الْجَحِيمَ (6) ಖಂಡಿತ ನೀವು ನರಕವನ್ನು ಕಾಣುವಿರಿ |
ثُمَّ لَتَرَوُنَّهَا عَيْنَ الْيَقِينِ (7) ಮತ್ತೆ, ನಂಬಿಕೆ ತುಂಬಿದ ಕಣ್ಣುಗಳಿಂದ ನೀವು ಅದನ್ನು ಖಂಡಿತ ಕಾಣುವಿರಿ |
ثُمَّ لَتُسْأَلُنَّ يَوْمَئِذٍ عَنِ النَّعِيمِ (8) ಕೊನೆಗೆ ಆ ದಿನ ನಿಮ್ಮೊಡನೆ, ನಿಮಗೆ ನೀಡಲಾಗಿದ್ದ ಕೊಡುಗೆಗಳ ಕುರಿತು ಪ್ರಶ್ನಿಸಲಾಗುವುದು |