هَلْ أَتَاكَ حَدِيثُ الْغَاشِيَةِ (1) ಎಲ್ಲವನ್ನೂ ಆವರಿಸುವ (ಲೋಕಾಂತ್ಯ) ದಿನದ ವಾರ್ತೆಯು ನಿಮಗೆ ತಲುಪಿದೆಯೇ |
وُجُوهٌ يَوْمَئِذٍ خَاشِعَةٌ (2) ಅಂದು ಕೆಲವು ಮುಖಗಳು ಭೀತವಾಗಿರುವವು |
عَامِلَةٌ نَّاصِبَةٌ (3) ತೀವ್ರವಾಗಿ ದಣಿದು ಸೋತಿರುವವು |
تَصْلَىٰ نَارًا حَامِيَةً (4) ಅವರು ಉರಿಯುವ ಬೆಂಕಿಯನ್ನು ಸೇರುವರು |
تُسْقَىٰ مِنْ عَيْنٍ آنِيَةٍ (5) ಕುದಿಯುವ ಚಿಲುಮೆಯ ನೀರನ್ನು ಅವರಿಗೆ ಕುಡಿಸಲಾಗುವುದು |
لَّيْسَ لَهُمْ طَعَامٌ إِلَّا مِن ضَرِيعٍ (6) ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ ಸಿಗದು |
لَّا يُسْمِنُ وَلَا يُغْنِي مِن جُوعٍ (7) ಅದರಿಂದ ಅವರಿಗೆ ಪುಷ್ಟತೆಯೂ ಸಿಗದು ಮತ್ತು ಅವರ ಹಸಿವೂ ನೀಗದು |
وُجُوهٌ يَوْمَئِذٍ نَّاعِمَةٌ (8) ಕೆಲವು ಮುಖಗಳು ಅಂದು ಸಂಭ್ರಮಿಸುತ್ತಿರುವವು |
لِّسَعْيِهَا رَاضِيَةٌ (9) ತಮ್ಮ ಗಳಿಕೆಯಿಂದ ಅವರು ಸಂತೃಪ್ತರಾಗಿರುವರು |
فِي جَنَّةٍ عَالِيَةٍ (10) ಅವರು ಉನ್ನತವಾದ ತೋಟಗಳಲ್ಲಿರುವರು |
لَّا تَسْمَعُ فِيهَا لَاغِيَةً (11) ವ್ಯರ್ಥವಾದ ಯಾವುದನ್ನೂ ಅವರು ಅಲ್ಲಿ ಕೇಳಲಾರರು |
فِيهَا عَيْنٌ جَارِيَةٌ (12) ಅಲ್ಲಿ ಚಿಲುಮೆಗಳು ಹರಿಯುತ್ತಿರುವವು |
فِيهَا سُرُرٌ مَّرْفُوعَةٌ (13) ಅಲ್ಲಿ ಎತ್ತರದಲ್ಲಿ ಹಾಸಿರುವ ಪೀಠಗಳಿರುವವು |
وَأَكْوَابٌ مَّوْضُوعَةٌ (14) ಸಾಲಾಗಿಟ್ಟ ಪಾನ ಪಾತ್ರೆಗಳಿರುವವು |
وَنَمَارِقُ مَصْفُوفَةٌ (15) ಸಾಲುಸಾಲಾಗಿ ದಿಂಬುಗಳಿರುವವು |
وَزَرَابِيُّ مَبْثُوثَةٌ (16) ಮತ್ತು ನುಣುಪಾದ ಹಾಸುಗಳು ಇರುವವು |
أَفَلَا يَنظُرُونَ إِلَى الْإِبِلِ كَيْفَ خُلِقَتْ (17) ಅವರು ಹೆಣ್ಣೊಂಟೆಯತ್ತ ನೋಡುವುದಿಲ್ಲವೇ – ಅವುಗಳನ್ನು ಯಾವ ರೀತಿ ಸೃಷ್ಟಿಸಲಾಗಿದೆ ಎಂದು |
وَإِلَى السَّمَاءِ كَيْفَ رُفِعَتْ (18) ಮತ್ತು ಆಕಾಶದೆಡೆಗೆ, (ನೋಡುವುದಿಲ್ಲವೇ,) ಅದನ್ನು ಯಾವ ರೀತಿ ಎತ್ತರಿಸಲಾಗಿದೆ ಎಂದು |
وَإِلَى الْجِبَالِ كَيْفَ نُصِبَتْ (19) ಮತ್ತು ಪರ್ವತಗಳೆಡೆಗೆ, (ನೋಡುವುದಿಲ್ಲವೇ) ಅವುಗಳನ್ನು ಯಾವ ರೀತಿ ನೆಡಲಾಗಿದೆ ಎಂದು |
وَإِلَى الْأَرْضِ كَيْفَ سُطِحَتْ (20) ಮತ್ತು ಭೂಮಿಯೆಡೆಗೆ, (ನೋಡುವುದಿಲ್ಲವೇ) ಅದನ್ನು ಯಾವ ರೀತಿ ಹಾಸಲಾಗಿದೆ ಎಂದು |
فَذَكِّرْ إِنَّمَا أَنتَ مُذَكِّرٌ (21) (ದೂತರೇ,) ನೀವು ಬೋಧಿಸಿರಿ, ಏಕೆಂದರೆ ನೀವು ಬೋಧಕರೇ ಆಗಿದ್ದೀರಿ |
لَّسْتَ عَلَيْهِم بِمُصَيْطِرٍ (22) ನೀವು ಅವರ ಕಾವಲುಗಾರರೇನಲ್ಲ |
إِلَّا مَن تَوَلَّىٰ وَكَفَرَ (23) ಇನ್ನು ಕಡೆಗಣಿಸಿದವನ ಮತ್ತು ಧಿಕ್ಕರಿಸಿದವನ ವಿಚಾರ – |
فَيُعَذِّبُهُ اللَّهُ الْعَذَابَ الْأَكْبَرَ (24) ಅಲ್ಲಾಹನು ಅವನನ್ನು ದೊಡ್ಡ ಶಿಕ್ಷೆಗೆ ಗುರಿಪಡಿಸುವನು |
إِنَّ إِلَيْنَا إِيَابَهُمْ (25) ಅವರು ಖಂಡಿತ ನಮ್ಮೆಡೆಗೇ ಮರಳಿ ಬರಬೇಕಾಗಿದೆ |
ثُمَّ إِنَّ عَلَيْنَا حِسَابَهُم (26) ಮತ್ತು ಅವರ ವಿಚಾರಣೆಯ ಹೊಣೆಯು ನಮ್ಮ ಮೇಲಿದೆ |