| وَالسَّمَاءِ وَالطَّارِقِ (1) ಆಕಾಶದಾಣೆ ಮತ್ತು ‘ತ್ವಾರಿಕ್’ ನಾಣೆ
 | 
| وَمَا أَدْرَاكَ مَا الطَّارِقُ (2) ‘ತ್ವಾರಿಕ್’ ಏನೆಂದು ನಿಮಗೇನು ಗೊತ್ತು
 | 
| النَّجْمُ الثَّاقِبُ (3) ಅದು ಮಿನುಗುವ ತಾರೆ
 | 
| إِن كُلُّ نَفْسٍ لَّمَّا عَلَيْهَا حَافِظٌ (4) ಪ್ರತಿಯೊಂದು ಜೀವದ ಮೇಲೂ ಒಬ್ಬ ಮೇಲ್ವಿಚಾರಕನಿರುತ್ತಾನೆ
 | 
| فَلْيَنظُرِ الْإِنسَانُ مِمَّ خُلِقَ (5) ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನೊಮ್ಮೆ ನೋಡಲಿ
 | 
| خُلِقَ مِن مَّاءٍ دَافِقٍ (6) ಅವರನ್ನು ಜಿಗಿಯುವ ನೀರಿನಿಂದ ಸೃಷ್ಟಿಸಲಾಗಿದೆ
 | 
| يَخْرُجُ مِن بَيْنِ الصُّلْبِ وَالتَّرَائِبِ (7) ಅದು ಬೆನ್ನು ಹಾಗೂ ಎದೆಯ ಮಧ್ಯದಿಂದ ಹೊರಡುತ್ತದೆ
 | 
| إِنَّهُ عَلَىٰ رَجْعِهِ لَقَادِرٌ (8) ಅವನು ಅವನನ್ನು (ಮನುಷ್ಯನನ್ನು) ಮತ್ತೊಮ್ಮೆ ಸೃಷ್ಟಿಸಲು ಖಂಡಿತ ಸಮರ್ಥನಾಗಿದ್ದಾನೆ
 | 
| يَوْمَ تُبْلَى السَّرَائِرُ (9) ಮನದೊಳಗಿನ ರಹಸ್ಯಗಳ ಪರಿಶೀಲನೆ (ಅಂತಿಮ ವಿಚಾರಣೆ) ನಡೆಯುವ ದಿನ
 | 
| فَمَا لَهُ مِن قُوَّةٍ وَلَا نَاصِرٍ (10) ಅಂದು ಅವನ (ಮಾನವನ) ಬಳಿ ಯಾವ ಶಕ್ತಿಯೂ ಇರದು. ಯಾವ ಸಹಾಯಕನೂ ಇರಲಾರನು
 | 
| وَالسَّمَاءِ ذَاتِ الرَّجْعِ (11) ಮಳೆ ಸುರಿಸುವ ಆಕಾಶದಾಣೆ
 | 
| وَالْأَرْضِ ذَاتِ الصَّدْعِ (12) ಬಿರಿಯುವ ಭೂಮಿಯಾಣೆ
 | 
| إِنَّهُ لَقَوْلٌ فَصْلٌ (13) ಇದು ನಿರ್ಣಾಯಕ ಸಂದೇಶ
 | 
| وَمَا هُوَ بِالْهَزْلِ (14) ಇದು ತಮಾಷೆಯಲ್ಲ
 | 
| إِنَّهُمْ يَكِيدُونَ كَيْدًا (15) ಅವರು ಸಂಚುಗಳನ್ನು ಹೂಡುತ್ತಿದ್ದಾರೆ
 | 
| وَأَكِيدُ كَيْدًا (16) ಮತ್ತು ನಾನೊಂದು ಸಂಚು ಹೂಡುತ್ತಿದ್ದೇನೆ
 | 
| فَمَهِّلِ الْكَافِرِينَ أَمْهِلْهُمْ رُوَيْدًا (17) ನೀವೀಗ ಧಿಕ್ಕಾರಿಗಳಿಗೆ ಕಾಲಾವಕಾಶವನ್ನು ನೀಡಿರಿ. ಕೇವಲ ಸ್ವಲ್ಪ ಕಾಲಾವಕಾಶ
 |