| ن ۚ وَالْقَلَمِ وَمَا يَسْطُرُونَ (1) ಹೇಳಿರಿ; ನೀವು ಚಿಂತಿಸಿ ನೋಡಿದಿರಾ? ನೀವು ಬಳಸುವ ನೀರು ಇಂಗಿ ಹೋದರೆ ಯಾರಿದ್ದಾರೆ, ನಿಮಗೆ ಸಿಹಿ ನೀರಿನ ಚಿಲುಮೆಗಳನ್ನು ತಂದು ಕೊಡುವವರು
 | 
| مَا أَنتَ بِنِعْمَةِ رَبِّكَ بِمَجْنُونٍ (2) ನೂನ್ – ಲೇಖನಿಯ ಮತ್ತು ಅವರ (ಮಲಕ್‌ಗಳ) ಬರಹದ ಆಣೆ
 | 
| وَإِنَّ لَكَ لَأَجْرًا غَيْرَ مَمْنُونٍ (3) (ದೂತರೇ,) ನಿಮ್ಮ ಒಡೆಯನ ಅನುಗ್ರಹದಿಂದ ನೀವು ಹುಚ್ಚರೇನಲ್ಲ
 | 
| وَإِنَّكَ لَعَلَىٰ خُلُقٍ عَظِيمٍ (4) ನಿಮಗೆ, ಎಂದೂ ಮುಗಿಯದ ಪ್ರತಿಫಲವು ಸಿಗಲಿದೆ
 | 
| فَسَتُبْصِرُ وَيُبْصِرُونَ (5) ನೀವು ಖಂಡಿತ ಅತ್ಯುನ್ನತ ಮಟ್ಟದ ಚಾರಿತ್ರವಂತರು
 | 
| بِأَييِّكُمُ الْمَفْتُونُ (6) ಶೀಘ್ರವೇ ನೀವು ನೋಡುವಿರಿ ಮತ್ತು ಅವರೂ ನೋಡುವರು –
 | 
| إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِ وَهُوَ أَعْلَمُ بِالْمُهْتَدِينَ (7) – ನಿಮ್ಮ ಪೈಕಿ ಹುಚ್ಚನು ಯಾರೆಂದು
 | 
| فَلَا تُطِعِ الْمُكَذِّبِينَ (8) ತನ್ನ ದಾರಿಯಿಂದ ದೂರ ಸರಿದವನು ಯಾರೆಂಬುದನ್ನು ಚೆನ್ನಾಗಿ ಬಲ್ಲವನು ಆ ನಿಮ್ಮ ಒಡೆಯನು. ಯಾರು ಸರಿ ದಾರಿಯಲ್ಲಿದ್ದಾರೆ ಎಂಬುದನ್ನೂ ಅವನೇ ಬಲ್ಲನು
 | 
| وَدُّوا لَوْ تُدْهِنُ فَيُدْهِنُونَ (9) ನೀವು ಸುಳ್ಳುಗಾರರನ್ನು ಅನುಸರಿಸಬೇಡಿರಿ
 | 
| وَلَا تُطِعْ كُلَّ حَلَّافٍ مَّهِينٍ (10) ನೀವು ತುಸು ಮೃದು ಧೋರಣೆ ತಾಳಿದರೆ ತಾವೂ ಮೃದುವಾಗಬೇಕೆಂದು ಅವರು ಅಪೇಕ್ಷಿಸುತ್ತಿದ್ದಾರೆ
 | 
| هَمَّازٍ مَّشَّاءٍ بِنَمِيمٍ (11) ನೀವು ಖಂಡಿತ ಅನುಸರಿಸಬೇಡಿ – ಪದೇ ಪದೇ ಪ್ರಮಾಣ ಮಾಡುವ ನೀಚನನ್ನು
 | 
| مَّنَّاعٍ لِّلْخَيْرِ مُعْتَدٍ أَثِيمٍ (12) ದೂಷಿಸುತ್ತಾ ನಿಂದಿಸುತ್ತಾ ತಿರುಗಾಡುವಾತನನ್ನು
 | 
| عُتُلٍّ بَعْدَ ذَٰلِكَ زَنِيمٍ (13) ಸತ್ಕಾರ್ಯಕ್ಕೆ ಖರ್ಚು ಮಾಡದವನನ್ನು, ಅತಿರೇಕ ವೆಸಗುವ ಪಾಪಿಯನ್ನು
 | 
| أَن كَانَ ذَا مَالٍ وَبَنِينَ (14) ಉಗ್ರ ಸ್ವಭಾವದವನನ್ನು, ಚಾರಿತ್ರಹೀನನನ್ನು
 | 
| إِذَا تُتْلَىٰ عَلَيْهِ آيَاتُنَا قَالَ أَسَاطِيرُ الْأَوَّلِينَ (15) ತನ್ನ ಬಳಿ ಸಂಪತ್ತಿದೆ ಮತ್ತು ಪುತ್ರರಿದ್ದಾರೆಂದು (ಅವನು ಅಹಂಕರಿಸುತ್ತಾನೆ)
 | 
| سَنَسِمُهُ عَلَى الْخُرْطُومِ (16) ಅವನಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ‘‘ಅವೆಲ್ಲಾ ಗತಕಾಲದ ಕಥೆಗಳು’’ ಎನ್ನುತ್ತಾನೆ
 | 
| إِنَّا بَلَوْنَاهُمْ كَمَا بَلَوْنَا أَصْحَابَ الْجَنَّةِ إِذْ أَقْسَمُوا لَيَصْرِمُنَّهَا مُصْبِحِينَ (17) ಶೀಘ್ರವೇ ನಾವು ಅವನ ಮೂಗಿನ ಮೇಲೆ ಬರೆ ಎಳೆಯಲಿದ್ದೇವೆ
 | 
| وَلَا يَسْتَثْنُونَ (18) ಹಿಂದೆ ತೋಟದವರನ್ನು ಪರೀಕ್ಷಿಸಿದಂತೆ ನಾವು ಅವರನ್ನು ಪರೀಕ್ಷಿಸಿದ್ದೇವಷ್ಟೆ. ‘‘ನಾವು ಅದರ (ಆ ತೋಟದ) ಬೆಳೆಯನ್ನು ನಾಳೆ ಮುಂಜಾನೆ ಖಂಡಿತ ಕೊಯ್ಯುವೆವು’’ ಎಂದು ಅವರು ಪ್ರಮಾಣ ಮಾಡಿ ಘೋಷಿಸಿದ್ದರು
 | 
| فَطَافَ عَلَيْهَا طَائِفٌ مِّن رَّبِّكَ وَهُمْ نَائِمُونَ (19) ಇನ್ನೊಂದು ಸಾಧ್ಯತೆಯನ್ನು ಅವರು ಪ್ರಸ್ತಾಪಿಸಲಿಲ್ಲ. (‘ಅಲ್ಲಾಹನಿಚ್ಛಿಸಿದರೆ’ ಎನ್ನಲಿಲ್ಲ)
 | 
| فَأَصْبَحَتْ كَالصَّرِيمِ (20) ಅವರು ನಿದ್ರಿಸುತ್ತಿದ್ದಾಗಲೇ ನಿಮ್ಮೊಡೆಯನ ಕಡೆಯಿಂದ ಅದರ (ಆ ತೋಟದ) ಮೇಲೊಂದು ವಿಪತ್ತು ಬಂದೆರಗಿತು
 | 
| فَتَنَادَوْا مُصْبِحِينَ (21) ಬೆಳಗಾಗುವ ಹೊತ್ತಿಗೆ ಅದು ಬೆಳೆ ಕೊಯ್ದ ಹೊಲದಂತಾಗಿ ಬಿಟ್ಟಿತು
 | 
| أَنِ اغْدُوا عَلَىٰ حَرْثِكُمْ إِن كُنتُمْ صَارِمِينَ (22) ಬೆಳಿಗ್ಗೆ ಅವರು ಪರಸ್ಪರರನ್ನು ಕೂಗಿ ಕರೆಯಲಾರಂಭಿಸಿದರು
 | 
| فَانطَلَقُوا وَهُمْ يَتَخَافَتُونَ (23) ‘‘ನಿಮಗೆ ಫಲ ಕೊಯ್ಯಲಿಕ್ಕಿದ್ದರೆ ಮುಂಜಾವಿನಲ್ಲೇ ನಿಮ್ಮ ತೋಟವನ್ನು ತಲುಪಿರಿ’’ (ಎನ್ನ ತೊಡಗಿದರು)
 | 
| أَن لَّا يَدْخُلَنَّهَا الْيَوْمَ عَلَيْكُم مِّسْكِينٌ (24) ಹೀಗೆ, ಅವರು ಹೊರಟರು ಮತ್ತು ಅವರು ಗುಟ್ಟಾಗಿ ಮಾತನಾಡಿಕೊಳ್ಳುತ್ತಿದ್ದರು
 | 
| وَغَدَوْا عَلَىٰ حَرْدٍ قَادِرِينَ (25) ‘‘ಇಂದು ಯಾವ ಬಡ ವ್ಯಕ್ತಿಯೂ ನಿಮ್ಮ ಬಳಿಗೆ ಬರದಂತೆ ನೋಡಿಕೊಳ್ಳಿ’’ (ಎಂದು)
 | 
| فَلَمَّا رَأَوْهَا قَالُوا إِنَّا لَضَالُّونَ (26) ಅವರು, ತಾವು ಭಾರೀ ಶಕ್ತರೆಂದು ಬೀಗುತ್ತಾ ಹೊರಟರು
 | 
| بَلْ نَحْنُ مَحْرُومُونَ (27) ಕೊನೆಗೆ ಅವರು, ಅದನ್ನು (ತೋಟವನ್ನು) ಕಂಡಾಗ, ‘‘ನಾವು ದಾರಿ ತಪ್ಪಿದ್ದೇವೆ’’ ಎನ್ನತೊಡಗಿದರು
 | 
| قَالَ أَوْسَطُهُمْ أَلَمْ أَقُل لَّكُمْ لَوْلَا تُسَبِّحُونَ (28) ‘‘ನಿಜವಾಗಿ, ನಾವು ಭಾಗ್ಯಹೀನರು’’ (ಎಂದು ಕೆಲವರು ಹೇಳಿದರು)
 | 
| قَالُوا سُبْحَانَ رَبِّنَا إِنَّا كُنَّا ظَالِمِينَ (29) ಅವರಲ್ಲಿನ ಸಂತುಲಿತ ವ್ಯಕ್ತಿಯೊಬ್ಬನು ಹೇಳಿದನು; ‘‘(ಹೀಗಾದೀತೆಂದು) ನಾನು ನಿಮಗೆ ಹೇಳಿರಲಿಲ್ಲವೇ? ನೀವೇಕೆ (ಅಲ್ಲಾಹನ) ಪಾವಿತ್ರವನ್ನು ಜಪಿಸುವುದಿಲ್ಲ?’’
 | 
| فَأَقْبَلَ بَعْضُهُمْ عَلَىٰ بَعْضٍ يَتَلَاوَمُونَ (30) ಮರುದಿನ (ಮುಂಜಾನೆ) ಅವರು ಹೇಳಿದರು; ‘‘ನಮ್ಮ ಒಡೆಯನು ಪಾವನನು. ನಾವು ಖಂಡಿತಾ ಅಕ್ರಮಿಗಳಾಗಿದ್ದೆವು’’
 | 
| قَالُوا يَا وَيْلَنَا إِنَّا كُنَّا طَاغِينَ (31) ಆ ಬಳಿಕ ಅವರು ಪರಸ್ಪರರನ್ನು ದೂಷಿಸಲು ಆರಂಭಿಸಿದರು
 | 
| عَسَىٰ رَبُّنَا أَن يُبْدِلَنَا خَيْرًا مِّنْهَا إِنَّا إِلَىٰ رَبِّنَا رَاغِبُونَ (32) ಅವರು ಹೇಳಿದರು; ‘‘ಅಯ್ಯೋ ನಮ್ಮ ದೌರ್ಭಾಗ್ಯವೇ, ನಾವು ಎಲ್ಲೆ ಮೀರಿ ಬಿಟ್ಟಿದ್ದೆವು’’
 | 
| كَذَٰلِكَ الْعَذَابُ ۖ وَلَعَذَابُ الْآخِرَةِ أَكْبَرُ ۚ لَوْ كَانُوا يَعْلَمُونَ (33) ‘‘ನಮ್ಮ ಒಡೆಯನು ನಮಗೆ ಇದಕ್ಕಿಂತ ಉತ್ತಮವಾದುದನ್ನು ನೀಡಬಹುದು. ನಾವು ನಮ್ಮೊಡೆಯನೆಡೆಗೆ ಒಲಿಯುತ್ತಿದ್ದೇವೆ’’
 | 
| إِنَّ لِلْمُتَّقِينَ عِندَ رَبِّهِمْ جَنَّاتِ النَّعِيمِ (34) ಹೀಗಿರುತ್ತದೆ, ನಮ್ಮ ಶಿಕ್ಷೆ. ಪರಲೋಕದ ಶಿಕ್ಷೆಯಂತೂ ಇದಕ್ಕಿಂತ ಹಿರಿದಾಗಿರುತ್ತದೆ. ಅದನ್ನು ಅವರು ಅರಿತಿದ್ದರೆ ಚೆನ್ನಾಗಿತ್ತು
 | 
| أَفَنَجْعَلُ الْمُسْلِمِينَ كَالْمُجْرِمِينَ (35) ಧರ್ಮನಿಷ್ಠರಿಗಾಗಿ, ಅವರ ಒಡೆಯನ ಬಳಿ ಅನುಗ್ರಹಗಳು ತುಂಬಿದ ಉದ್ಯಾನಗಳಿವೆ
 | 
| مَا لَكُمْ كَيْفَ تَحْكُمُونَ (36) ನಾವೇನು, ಮುಸ್ಲಿಮರಿಗೆ (ಶರಣಾದವರಿಗೆ) ಮತ್ತು ಅಪರಾಧಿಗಳಿಗೆ ಒಂದೇ ಗತಿಯನ್ನು ಒದಗಿಸುವೆವೇ
 | 
| أَمْ لَكُمْ كِتَابٌ فِيهِ تَدْرُسُونَ (37) ನಿಮಗೇನಾಗಿದೆ? ನೀವು ಅದೆಂತಹ ತೀರ್ಮಾನಗಳನ್ನು ಕೈಗೊಳ್ಳುತ್ತೀರಿ
 | 
| إِنَّ لَكُمْ فِيهِ لَمَا تَخَيَّرُونَ (38) ನಿಮ್ಮ ಬಳಿ ನೀವು ಓದುವ ದಿವ್ಯ ಗ್ರಂಥವೇನಾದರೂ ಇದೆಯೇ
 | 
| أَمْ لَكُمْ أَيْمَانٌ عَلَيْنَا بَالِغَةٌ إِلَىٰ يَوْمِ الْقِيَامَةِ ۙ إِنَّ لَكُمْ لَمَا تَحْكُمُونَ (39) ಅದರಲ್ಲಿ ನಿಮಗೆ ಇಷ್ಟವಿರುವ ಎಲ್ಲವೂ ಸಿಗುತ್ತಿದೆಯೇ
 | 
| سَلْهُمْ أَيُّهُم بِذَٰلِكَ زَعِيمٌ (40) ಅಥವಾ ನೀವು ತೀರ್ಮಾನಿಸಿದ್ದನ್ನೆಲ್ಲಾ ನಾವು ನಿಮಗೆ ಕೊಟ್ಟು ಬಿಡಬೇಕೆಂದು, ಪುನರುತ್ಥಾನದ ದಿನದವರೆಗೂ ನಾವು ಪಾಲಿಸಲೇ ಬೇಕಾದ ಕರಾರನ್ನು ನೀವು ನಮ್ಮಿಂದ ಪಡೆದಿರುವಿರಾ
 | 
| أَمْ لَهُمْ شُرَكَاءُ فَلْيَأْتُوا بِشُرَكَائِهِمْ إِن كَانُوا صَادِقِينَ (41) ಅವರ ಪೈಕಿ ಅದರ ಹೊಣೆಯನ್ನು ವಹಿಸಿಕೊಂಡವರು ಯಾರೆಂದು ಅವರೊಡನೆ ಕೇಳಿರಿ
 | 
| يَوْمَ يُكْشَفُ عَن سَاقٍ وَيُدْعَوْنَ إِلَى السُّجُودِ فَلَا يَسْتَطِيعُونَ (42) ಅಥವಾ ಅವರ ಬಳಿ (ದೇವತ್ವದ) ಪಾಲುದಾರರು ಇದ್ದಾರೆಯೇ? ಅವರು ಸತ್ಯವಂತರಾಗಿದ್ದರೆ ಆ ತಮ್ಮ ಪಾಲುದಾರರನ್ನು ಹಾಜರುಪಡಿಸಲಿ
 | 
| خَاشِعَةً أَبْصَارُهُمْ تَرْهَقُهُمْ ذِلَّةٌ ۖ وَقَدْ كَانُوا يُدْعَوْنَ إِلَى السُّجُودِ وَهُمْ سَالِمُونَ (43) ಹಾಲಾಹಲ ಮೆರೆದಿರುವ (ಪುನರುತ್ಥಾನದ) ದಿನ, ಸಾಷ್ಟಾಂಗವೆರಗಲು ಅವರನ್ನು ಕರೆಯಲಾಗುವುದು. ಆದರೆ ಅವರಿಗೆ ಅದು ಸಾಧ್ಯವಾಗದು
 | 
| فَذَرْنِي وَمَن يُكَذِّبُ بِهَٰذَا الْحَدِيثِ ۖ سَنَسْتَدْرِجُهُم مِّنْ حَيْثُ لَا يَعْلَمُونَ (44) ಭಯದಿಂದ ಅವರ ದೃಷ್ಟಿಗಳು ತಗ್ಗಿರುವವು ಮತ್ತು ಅಪಮಾನವು ಅವರನ್ನು ಆವರಿಸಿರುವುದು. ಈ ಹಿಂದೆ ಅವರು ಸ್ವಸ್ಥರಾಗಿದ್ದಾಗ ಸಾಷ್ಟಾಂಗವೆರಗಲು ಅವರನ್ನು ಕರೆಯಲಾಗಿತ್ತು. (ಅವರು ಅದನ್ನು ಕಡೆಗಣಿಸಿದ್ದರು)
 | 
| وَأُمْلِي لَهُمْ ۚ إِنَّ كَيْدِي مَتِينٌ (45) ನನ್ನನ್ನು ಬಿಟ್ಟು ಬಿಡಿ. ಈ ಸಂದೇಶವನ್ನು ತಿರಸ್ಕರಿಸಿದವನನ್ನು ನಾನು (ಅಲ್ಲಾಹ್) ನೋಡಿಕೊಳ್ಳುವೆನು. ಅವರಿಗೆ ಅರಿವೇ ಇಲ್ಲದಂತೆ ನಾವು ಕ್ರಮೇಣ ಅವರನ್ನು ಹಿಡಿದುಕೊಳ್ಳುವೆವು
 | 
| أَمْ تَسْأَلُهُمْ أَجْرًا فَهُم مِّن مَّغْرَمٍ مُّثْقَلُونَ (46) ಸದ್ಯ ನಾನು ಅವರಿಗೆ ಕಾಲಾವಕಾಶ ಕೊಡುತ್ತಿದ್ದೇನೆ. ನನ್ನ ಯೋಜನೆಯು ಖಂಡಿತ ಬಲಿಷ್ಠವಾಗಿರುತ್ತದೆ
 | 
| أَمْ عِندَهُمُ الْغَيْبُ فَهُمْ يَكْتُبُونَ (47) (ದೂತರೇ,) ನೀವೇನು ಅವರೊಡನೆ ಏನಾದರೂ ಸಂಭಾವನೆಯನ್ನು ಕೇಳಿರುವಿರಾ? ಮತ್ತು ಅವರು ಅದರ ಭಾರದಡಿಯಲ್ಲಿ ನರಳುತ್ತಿದ್ದಾರೆಯೇ
 | 
| فَاصْبِرْ لِحُكْمِ رَبِّكَ وَلَا تَكُن كَصَاحِبِ الْحُوتِ إِذْ نَادَىٰ وَهُوَ مَكْظُومٌ (48) ಅಥವಾ ಅವರ ಬಳಿ, ಅವರು ಬರೆದಿಡುತ್ತಿರುವ ಗುಪ್ತ ಜ್ಞಾನವೇನಾದರೂ ಇದೆಯೇ
 | 
| لَّوْلَا أَن تَدَارَكَهُ نِعْمَةٌ مِّن رَّبِّهِ لَنُبِذَ بِالْعَرَاءِ وَهُوَ مَذْمُومٌ (49) (ದೂತರೇ,) ನೀವು ನಿಮ್ಮೊಡೆಯನ ಆದೇಶ ಬರುವ ತನಕ ಸಹನಶೀಲರಾಗಿರಿ. ಮತ್ತು ನೀವು ಮೀನಿನವರಂತೆ (ಯೂನುಸರಂತೆ) ಆಗದಿರಿ. ಅವರು ಬಹಳ ನೊಂದ ಸ್ಥಿತಿಯಲ್ಲಿ (ಅಲ್ಲಾಹನಿಗೆ) ಮೊರೆ ಇಟ್ಟಿದ್ದರು
 | 
| فَاجْتَبَاهُ رَبُّهُ فَجَعَلَهُ مِنَ الصَّالِحِينَ (50) ಅವರ ಒಡೆಯನ ಅನುಗ್ರಹವು ಅವರಿಗೆ ನೆರವಾಗದೆ ಇದ್ದಿದ್ದರೆ ಅವರು ತೀರಾ ಕೆಟ್ಟ ಸ್ಥಿತಿಯಲ್ಲಿ ಒಂದು ಬಟ್ಟ ಬಯಲಿಗೆ ಎಸೆಯಲ್ಪಡುತ್ತಿದ್ದರು
 | 
| وَإِن يَكَادُ الَّذِينَ كَفَرُوا لَيُزْلِقُونَكَ بِأَبْصَارِهِمْ لَمَّا سَمِعُوا الذِّكْرَ وَيَقُولُونَ إِنَّهُ لَمَجْنُونٌ (51) ಅವರ ಒಡೆಯನು ಅವರನ್ನು ಆಯ್ದುಕೊಂಡನು ಮತ್ತು ಅವರನ್ನು ಸಜ್ಜನರ ಸಾಲಿಗೆ ಸೇರಿಸಿದನು
 | 
| وَمَا هُوَ إِلَّا ذِكْرٌ لِّلْعَالَمِينَ (52) (ದೂತರೇ,) ಧಿಕ್ಕಾರಿಗಳು ಉಪದೇಶವನ್ನು ಕೇಳಿದಾಗ ತಮ್ಮ ದೃಷ್ಟಿಯಿಂದಲೇ ನಿಮ್ಮನ್ನು ನುಚ್ಚುನೂರು ಮಾಡುವರೋ ಎಂಬಂತೆ ನಿಮ್ಮೆಡೆಗೆ ನೋಡುತ್ತಾರೆ ಮತ್ತು ‘‘ಅವನು ಖಂಡಿತ ಹುಚ್ಚ’’ ಎನ್ನುತ್ತಾರೆ
 |