إِذَا السَّمَاءُ انفَطَرَتْ (1) ಆಕಾಶವು ಬಿರಿದು ಬೀಳುವಾಗ |
وَإِذَا الْكَوَاكِبُ انتَثَرَتْ (2) ಮತ್ತು ನಕ್ಷತ್ರಗಳು ಉದುರುವಾಗ |
وَإِذَا الْبِحَارُ فُجِّرَتْ (3) ಸಮುದ್ರಗಳು ವಿಲೀನವಾದಾಗ |
وَإِذَا الْقُبُورُ بُعْثِرَتْ (4) ಗೋರಿಗಳನ್ನು ಬಿಚ್ಚಲಾದಾಗ |
عَلِمَتْ نَفْسٌ مَّا قَدَّمَتْ وَأَخَّرَتْ (5) ಪ್ರತಿಯೊಬ್ಬನೂ ಅರಿಯುವನು, ತಾನು ಮುಂದೆ ಕಳಿಸಿದ್ದನ್ನು ಮತ್ತು ಹಿಂದೆ ಬಿಟ್ಟು ಬಂದುದನ್ನು |
يَا أَيُّهَا الْإِنسَانُ مَا غَرَّكَ بِرَبِّكَ الْكَرِيمِ (6) ಮಾನವನೇ, ಆ ನಿನ್ನ ಉದಾರಿ ಒಡೆಯನ ವಿಷಯದಲ್ಲಿ ನಿನ್ನನ್ನು ಮೋಸಗೊಳಿಸಿದ ವಸ್ತು ಯಾವುದು |
الَّذِي خَلَقَكَ فَسَوَّاكَ فَعَدَلَكَ (7) ಅವನೇ ನಿನ್ನನ್ನು ಸೃಷ್ಟಿಸಿದನು (ನಿನ್ನ ಅಂಗಾಂಗಗಳನ್ನು) ಸರಿಪಡಿಸಿದನು, ಸಂತುಲಿತವಾಗಿ ನಿನ್ನನ್ನು ರಚಿಸಿದನು |
فِي أَيِّ صُورَةٍ مَّا شَاءَ رَكَّبَكَ (8) ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು |
كَلَّا بَلْ تُكَذِّبُونَ بِالدِّينِ (9) ಹಾಗಲ್ಲ – ನಿಜವಾಗಿ, ನೀವು ಪ್ರತಿಫಲದ ದಿನವನ್ನು ತಿರಸ್ಕರಿಸುತ್ತೀರಿ |
وَإِنَّ عَلَيْكُمْ لَحَافِظِينَ (10) ನಿಮ್ಮ ಮೇಲೆ ಕಾವಲುಗಾರರು ನಿಯುಕ್ತರಾಗಿದ್ದಾರೆ |
كِرَامًا كَاتِبِينَ (11) (ನಿಮ್ಮ ಕರ್ಮಗಳನ್ನು) ಬರೆದಿಡುವ ಗೌರವಾನ್ವಿತರು |
يَعْلَمُونَ مَا تَفْعَلُونَ (12) ನೀವು ಮಾಡುವುದನ್ನೆಲ್ಲಾ ಅವರು ಬಲ್ಲರು |
إِنَّ الْأَبْرَارَ لَفِي نَعِيمٍ (13) ಸಜ್ಜನರು ಸ್ವರ್ಗದಲ್ಲಿ ಖಂಡಿತ ಐಶಾರಾಮದಲ್ಲಿರುವರು |
وَإِنَّ الْفُجَّارَ لَفِي جَحِيمٍ (14) ದುಷ್ಟರು ನರಕಾಗ್ನಿಯಲ್ಲಿರುವರು |
يَصْلَوْنَهَا يَوْمَ الدِّينِ (15) ಪ್ರತಿಫಲದ ದಿನ ಅವರು ಅದರೊಳಗೆ ಪ್ರವೇಶಿಸುವರು |
وَمَا هُمْ عَنْهَا بِغَائِبِينَ (16) ಅದರಿಂದ ಅವಿತಿರಲು ಅವರಿಗೆ ಸಾಧ್ಯವಾಗದು |
وَمَا أَدْرَاكَ مَا يَوْمُ الدِّينِ (17) ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು |
ثُمَّ مَا أَدْرَاكَ مَا يَوْمُ الدِّينِ (18) ಹೌದು – ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು |
يَوْمَ لَا تَمْلِكُ نَفْسٌ لِّنَفْسٍ شَيْئًا ۖ وَالْأَمْرُ يَوْمَئِذٍ لِّلَّهِ (19) ಅಂದು ಯಾರಿಂದಲೂ ಯಾರಿಗೂ ಕಿಂಚಿತ್ತೂ ಪ್ರಯೋಜನವಾಗದು. ಅಧಿಕಾರವು ಅಂದು ಸಂಪೂರ್ಣವಾಗಿ ಅಲ್ಲಾಹನದ್ದಾಗಿರುವುದು |