القرآن باللغة الكانادا - سورة التين مترجمة إلى اللغة الكانادا، Surah Tin in Kannada. نوفر ترجمة دقيقة سورة التين باللغة الكانادا - Kannada, الآيات 8 - رقم السورة 95 - الصفحة 597.

| بِّسْمِ اللَّهِ الرَّحْمَٰنِ الرَّحِيمِ وَالتِّينِ وَالزَّيْتُونِ (1) ಅಂಜೂರದಾಣೆ ಹಾಗೂ ಇಪ್ಪೆಯಾಣೆ | 
| وَطُورِ سِينِينَ (2) ಸೀನೀನ್ (ಸಿನಾಯ್) ಪರ್ವತದಾಣೆ | 
| وَهَٰذَا الْبَلَدِ الْأَمِينِ (3) ಮತ್ತು ಈ ಪ್ರಶಾಂತ ನಗರ (ಮಕ್ಕಃ)ದಾಣೆ | 
| لَقَدْ خَلَقْنَا الْإِنسَانَ فِي أَحْسَنِ تَقْوِيمٍ (4) ನಾವು ಮನುಷ್ಯನನ್ನು ಅತ್ಯುತ್ತಮ ಸ್ಪರೂಪದಲ್ಲಿ ಸೃಷ್ಟಿಸಿರುವೆವು | 
| ثُمَّ رَدَدْنَاهُ أَسْفَلَ سَافِلِينَ (5) ಆ ಬಳಿಕ ನಾವು ಅವನನ್ನು ತೀರಾ ಕೆಳಮಟ್ಟಕ್ಕೆ ಮರಳಿಸಿದೆವು | 
| إِلَّا الَّذِينَ آمَنُوا وَعَمِلُوا الصَّالِحَاتِ فَلَهُمْ أَجْرٌ غَيْرُ مَمْنُونٍ (6) ವಿಶ್ವಾಸಿಗಳಾದವರು ಹಾಗೂ ಸತ್ಕರ್ಮಗಳನ್ನು ಮಾಡುವವರ ಹೊರತು – ಅವರಿಗೆ ಅಪಾರ ಪ್ರತಿಫಲವಿದೆ | 
| فَمَا يُكَذِّبُكَ بَعْدُ بِالدِّينِ (7) (ಮಾನವನೇ,) ಇಷ್ಟಾಗಿಯೂ ನೀನು ಪ್ರತಿಫಲದ ದಿನವನ್ನು ತಿರಸ್ಕರಿಸುವುದೇಕೆ | 
| أَلَيْسَ اللَّهُ بِأَحْكَمِ الْحَاكِمِينَ (8) ಎಲ್ಲ ತೀರ್ಪುಗಾರರಿಗಿಂತ ದೊಡ್ಡ ತೀರ್ಪುಗಾರನು ಅಲ್ಲಾಹನಲ್ಲವೇ |