وَالشَّمْسِ وَضُحَاهَا (1) ಸೂರ್ಯನ ಹಾಗೂ ಅದರ ಬೆಳಕಿನಾಣೆ |
وَالْقَمَرِ إِذَا تَلَاهَا (2) ಮತ್ತು ಅದರ (ಸೂರ್ಯನ) ಬೆನ್ನಿಗೇ ಉದಯಿಸುವ ಚಂದ್ರನಾಣೆ |
وَالنَّهَارِ إِذَا جَلَّاهَا (3) ಹಗಲಿನ ಹಾಗೂ ಅದನ್ನು ಬೆಳಗಿಸಿದವನಾಣೆ |
وَاللَّيْلِ إِذَا يَغْشَاهَا (4) ಅದನ್ನು ಮರೆ ಮಾಚಿಬಿಡುವ ರಾತ್ರಿಯಾಣೆ |
وَالسَّمَاءِ وَمَا بَنَاهَا (5) ಆಕಾಶದ ಹಾಗೂ ಅದನ್ನು ನಿರ್ಮಿಸಿದವನಾಣೆ |
وَالْأَرْضِ وَمَا طَحَاهَا (6) ಭೂಮಿಯ ಹಾಗೂ ಅದನ್ನು ಹರಡಿದವನಾಣೆ |
وَنَفْسٍ وَمَا سَوَّاهَا (7) ಮನುಷ್ಯ ಚಿತ್ತದ ಹಾಗೂ ಅದನ್ನು ರೂಪಿಸಿದವನಾಣೆ |
فَأَلْهَمَهَا فُجُورَهَا وَتَقْوَاهَا (8) ಆ ಬಳಿಕ ಅದಕ್ಕೆ ದುಷ್ಟತನದ ಹಾಗೂ ಧರ್ಮ ನಿಷ್ಠೆಯ ಅರಿವು ನೀಡಿದವನಾಣೆ |
قَدْ أَفْلَحَ مَن زَكَّاهَا (9) ಅದನ್ನು ನಿರ್ಮಲವಾಗಿಟ್ಟವನು ವಿಜಯಿಯಾದನು |
وَقَدْ خَابَ مَن دَسَّاهَا (10) ಅದನ್ನು ಮಲಿನ ಗೊಳಿಸಿದವನು ಸೋತನು |
كَذَّبَتْ ثَمُودُ بِطَغْوَاهَا (11) ಸಮೂದ್ ಜನಾಂಗದವರು ತಮ್ಮ ಅಹಂಕಾರದ ಕಾರಣ (ದೂತರನ್ನು) ತಿರಸ್ಕರಿಸಿದರು |
إِذِ انبَعَثَ أَشْقَاهَا (12) ಅವರಲ್ಲಿನ ತೀರಾ ದುಷ್ಟನೊಬ್ಬನು ಎದ್ದು ನಿಂತನು |
فَقَالَ لَهُمْ رَسُولُ اللَّهِ نَاقَةَ اللَّهِ وَسُقْيَاهَا (13) ಆಗ ಅಲ್ಲಾಹನ ದೂತರು – ಅಲ್ಲಾಹನ ಒಂಟೆ ಮತ್ತು ಅವರ ನೀರು ಕುಡಿಯುವ ಸರದಿಯ ಕುರಿತು ಎಚ್ಚರವಿರಲಿ – ಎಂದರು |
فَكَذَّبُوهُ فَعَقَرُوهَا فَدَمْدَمَ عَلَيْهِمْ رَبُّهُم بِذَنبِهِمْ فَسَوَّاهَا (14) ಆದರೆ ಅವರು ಅವರ (ದೂತರ) ಮಾತನ್ನು (ಸುಳ್ಳೆಂದು) ತಿರಸ್ಕರಿಸಿದರು ಹಾಗೂ ಅದರ (ಒಂಟೆಯ) ಕಾಲುಗಳನ್ನು ಕಡಿದು ಬಿಟ್ಟರು. ಆಗ ಅವರ ಪಾಪದ ಕಾರಣ ಅವರ ಒಡೆಯನು ಅವರ ಮೇಲೊಂದು ಶಿಕ್ಷೆಯನ್ನು ಎರಗಿಸಿದನು ಹಾಗೂ ಅವರನ್ನು ನೆಲಸಮ ಗೊಳಿಸಿಬಿಟ್ಟನು |
وَلَا يَخَافُ عُقْبَاهَا (15) ಅದರ ಪರಿಣಾಮವೇನಾದೀತು ಎಂದು ಅವನು ಅಂಜಲಿಲ್ಲ |